10 March, 2009

ಕಾಡದಿರಲಿ ನಿನ್ನನೆಂದೂ...

ಮನಸಿನ ಒಳ ಹೊರಗನ್ನೆಲ್ಲಾ ಆವರಿಸಿರುವ ಮಂದಾರ ಸಿಂಚನವೇ,
ಮಟ ಮಟ ಮಧ್ಯಾಹ್ನದ ಹೊತ್ತು.....ಗೋಡೆಗೊರಗಿ bolcony ಯ ಮೂಲೆಯಲ್ಲಿ ಒಬ್ಬನೇ ಮುದುರಿ ಮುದುರಿಕೊಂಡು ಕೂರುತ್ತೇನೆ ...ಎಷ್ಟು ನನ್ನ ಮೊಳಕಾಳನ್ನು ನಾನೇ ಗಟ್ಟಿಯಾಗಿ ತಬ್ಬಿಕೊಂಡರೂ ಒಳಗೆಲ್ಲಾ ಮುಟ್ಟಲಾಗದ ಗಟ್ಟಿ ನಿರ್ವಾತ.

ಎಷ್ಟು ಹೊತ್ತಾಯ್ತೊ ನಾನು ಹೀಗೆ ಕೂತು , ತಂಗಾಳಿಗೆ ಅಲ್ಲಾಡುತ್ತಾ ನನ್ನ ತಲೆ ನೇವರಿಸುತ್ತಿರುವ ತೆಂಗಿನ ಗರಿಯ ನೆರಳು ಸುಸ್ತಾಗಿ ಕೈ ಚೆಲ್ಲಿದೆ ಇನ್ನು ಆಗೋಲ್ಲ ನನ್ನಿಂದ ಸಮಾಧಾನ ಮಾಡೋಕೆ ಅಂತ. ಇಲ್ಲಿ ನೋಡು ನನ್ನ ಪಾದದ ಬುಡದಲ್ಲಿ ಸಾಲುಗಟ್ಟಿರೊ ಇರುವೆಗಳೆಲ್ಲ ಒಂದೊಂದೇ ಮುಟ್ಟಿ ಮುಟ್ಟಿ ಮುಂದೆ ಹೋಗುತ್ತಾ ಇದಾವೆ, ಶವಸಂಸ್ಕಾರಕ್ಕೆ ಹೋದಾಗ ಭಾರವಾದ ಎದೆಯಿಂದ ಎಲ್ಲರೂ ಒಂದೊಂದು ಹಿಡಿ ಮಣ್ಣು ಹಾಕಿ ಹೋಗ್ತಾರಲ್ಲ ಹಾಗೆ.

ಅಮ್ಮ,ಅಪ್ಪ,ತಮ್ಮ ತಂಗಿ,ಗೆಳೆಯರೆಲ್ಲ ಸೇರಿ ಹೊದಿಸಿದ್ದ ಪ್ರೀತಿಯ ಹಚ್ಚಡದ ನೂಲಿನ ಸಣ್ಣ ಸಣ್ಣ ಎಳೆಗಳ ಮಧ್ಯದಲ್ಲೇ ಜಾಗ ಮಾಡಿಕೊಂಡು ಬಂದುಬಿಟ್ಟ್ಯಲ್ಲ...ಹೇಯ್ ಅದು ನಿನ್ನ ತಪ್ಪು ಅಂತ ಹೇಳ್ತಾ ಇಲ್ಲಪ್ಪಾ ನಾನು...ಆದರೂ ಎಲ್ಲಿ ಹೋದೆ, ಯಾಕೆ ಹೋದೆ ಅಂತಾನೂ ಹೇಳ್ದೆ ಹೋಗ್ಬಿಡೋದಾ ಪುಟ್ಟಿ?

ಹೋಗ್ಲಿ ಬಿಡು...ಏನಾದರೂ ಆಗ್ಲಿ, ಎಲ್ಲೋ ಒಂದು ಕಡೆ ಸಂತೋಷವಾಗಿ ಇದ್ದುಬಿಟ್ಟಿದ್ದೀಯ ಅನ್ನೋ ಒಂದೇ ಭರವಸೇಲಿ ಉಸಿರಾಡ್ತಿದೀನಿ....ನೀನು ಎಲ್ಲೇ ಇದ್ದರೂ ಅಲ್ಲಿರುವುದೆಲ್ಲ ನಿನ್ನ ಪ್ರೀತಿಯ ಬೆಳಗಿನಿಂದ ಫಳಫಳಿಸಲಿ .

ಈಗ ತಾನೇ ಹುಟ್ಟಿ, ಅಮ್ಮನ ಎದೆ ಹಾಲು ಕುಡಿದು ತೃಪ್ತಿಯಿಂದ, ನಿಶ್ಚಿಂತೆಯಿಂದ ಮಲಗಿದ ಮಗುವಿಗಿರುವಂಥ ನೆಮ್ಮದಿ ನಿನ್ನ ಬಾಳಿಗಿರಲಿ .
ಮಗುವಾಗಿಯೇ ಉಳಿದುಬಿಡು ನೀನು ಬೆಳೆಯುವುದೇ ಬೇಡ, ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.

11 comments:

  1. ಕ್ಯಾ ಗಮ್ ಹೈ ಜಿಸಕೋ ಛುಪಾ ರಹೆ ಹೋ?

    a casual browser

    ReplyDelete
  2. Chupaana kya hai? sab kuch khulke kikhdiya :)

    ReplyDelete
  3. "ಮಗುವಾಗಿಯೇ ಉಳಿದುಬಿಡು ನೀನು ಬೆಳೆಯುವುದೇ ಬೇಡ, ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ."

    ಇಂತಹ ಹಾರೈಕೆಗಳೇ ಕೆಲವೊಮ್ಮೆ ಕಲಕಿದ ಮನಸ್ಸಿಗೆ ನೆಮ್ಮದಿ ತುಂಬುತ್ತವೆ. ನಮ್ಮಿಂದ ಮರೆಯಾದವರು ಎಲ್ಲೋ ಇದ್ದಾರೆಂಬ ಕಲ್ಪನೆಯೇ ದು:ಖವನ್ನು ಸ್ವಲ್ಪಮಟ್ಟಿಗಾದರೂ ಹಗುರಗೊಳಿಸುತ್ತದೆ.

    ReplyDelete
  4. Brilliant thoughts and facts from Radiant person....

    ReplyDelete
  5. @ ತ್ರಿವೇಣಿ
    ಸತ್ಯ ನಿಮ್ಮ ಮಾತು.
    ಬಂದು ಓದಿದ್ದಕ್ಕೆ ಹೃತ್ಪೂರ್ವಕ ಧನ್ಯವಾದ.
    ದಯವಿಟ್ಟು ಬರ್ತಾ ಇರಿ ......
    @ Anonymous
    ಧನ್ಯವಾದ.ಹೆಸರು ಬರೆದಿದ್ದರೆ ಚೆನ್ನಾಗಿತ್ತು
    @Vinu
    ಧನ್ಯವಾದ, ಪ್ರತಿಕ್ರಿಯೆ ನನ್ನ ಬರಹದ ಬಗ್ಗೆ ಮಾತ್ರ ಇರ್ಲಿ please.........

    ReplyDelete
  6. baraha ninna anubhavadde adre innastu sathwa baritha sathya sahithyada nirikshe maadutthini

    utthama baraha

    ReplyDelete
  7. "yestu nanna monkaalannu naane gattiyaagi thabbikondaruooo olge mutalagada gatti nirvatha" thumba noovaadaga ago anubhava,odidmele ayyo yaaro thumba bejaarindidare takshna hogi samadhana madana annisthide ashtu heart touching agide kano ,gud :)keep writing ninna next barahakkagi kaaythirthini::)


    ---sreelatha(cinnu)

    ReplyDelete
  8. "ಈಗ ತಾನೇ ಹುಟ್ಟಿ, ಅಮ್ಮನ ಎದೆ ಹಾಲು ಕುಡಿದು ತೃಪ್ತಿಯಿಂದ, ನಿಶ್ಚಿಂತೆಯಿಂದ ಮಲಗಿದ ಮಗುವಿಗಿರುವಂಥ ನೆಮ್ಮದಿ ನಿನ್ನ ಬಾಳಿಗಿರಲಿ."


    ಇಂಥಾ ಒಂದು ಹಾರೈಕೆ ಒಬ್ಬ ಭಾವಜೀವಿಯಿಂದ ಅಲ್ಲದೇ ಮತ್ಯಾರಿಂದ ಬರಲು ಸಾದ್ಯ?
    ಬಹಳ ಅಮೋಘ... ನಿಮ್ಮ ಬರವಣಿಗೆ ನಿರಂತರವಾಗಿರಲಿ.

    ಅವೀನ್

    ReplyDelete
  9. ಸುನಿಲ್ ನಿಮ್ಮ ಭಾವನೆಗಳು ಪರಿಸ್ಥಿತಿಯ ವರ್ಣನೆ ನನ್ಗೆ ಇಷ್ಟಆಯಿತು..:)

    ReplyDelete
  10. Wow! Estu chennagide ninna bhavanegala baraha
    10 yrs admele odta iddini.... nanu

    ReplyDelete
  11. Nice script sunil, wishing you to be great writer one day. Make India and Karnataka proud.

    ReplyDelete