ತಾನೇ ಮಳೆಯಾಗುವ ಬಗೆ ಯಾರಿಗೆ ಬೇಕು?
ಮಳೆ ತರಿಸುವ ರೀತಿ ತಿಳಿಸಿಕೊಡಿ.
ಜೀವದಾಯಿನಿ ನದಿಗೆ ತುಂಬ ಬೇಕಿದೆ ಜೀವ...
ಒಣಗಿದ ಭುವಿಯೆದೆಗೆ ನೀಡೆ ತ್ಯಾವ,
ಅನ್ನದಾತನ ಕಣ್ಣೇರ ಅಳಿಸಬೇಕಿದೆ ನನಗೆ,
ಮಳೆ ತರಿಸುವ ರೀತಿ ಕಲಿಸಿ ಕೊಡಿ.
ಕನಸು ಬೀಳುವುದು ಯಾರಿಗೆ ಬೇಕು?
ಕನಸು ಕಾಣುವುದು ತಿಳಿಸಿ ಕೊಡಿ.....
ಹಿಂದಿನದು ಮುಂದಿನದು ಎಲ್ಲ ಬಂದು....
ತನ್ನದು ,ಪರರದು ಎಲ್ಲ ಎದುರು ನಿಂದು....
ಅಚ್ಚರಿ,ಆತಂಕ, ಆನಂದ ಇತ್ಯಾದಿ....ಯಾರಿಗೆ ಬೇಕು?
ಕನಸು ಕಾಣುವುದ ತಿಳಿಸಿ ಕೊಡಿ....
ಪಸೆ ಆರಿ ಬರಡೆದ್ದ ಮರಳುಮಣ್ಣಿನ ಮೇಲೆ ಸುರಿಯಬೇಕು ಮಂಜು ಮಳೆ ...
ಭಾವ ಕಾಣದೆ ಒಣಗಿದ ಗೀತ ಸಾಲಿನ ನಡುವೆ ನಗಬೇಕು ಹೊಸ ಗುಲಾಬಿ ಹೂವು
ಕನಸು ಕಾಣುವುದ ಕಲಿಸಿ ಕೊಡಿ.....
ತಾನೇ ಪ್ರೀತಿ ಮೂಡುವ ಬಗೆ ಯಾರಿಗೆ ಬೇಕು?
ಪ್ರೀತಿ ಮಾಡುವುದ ತಿಳಿಸಿಕೊಡಿ.....
ಪ್ರೀತಿ ಹುಟ್ಟುವ ಕ್ಷಣ, ಆಕ್ಷಣದ ಸಂಭ್ರಮ,ಕಾತರ, ಉಮ್ಮಳಿಕೆ ಯಾರಿಗೆ ಬೇಕು?
ಆ ಮೋಹ,ಅನುರಾಗ, ಆವೇಗ,ಉಬ್ಬರ...ಯಾರಿಗೆ ಬೇಕು?
ಪ್ರೀತಿ ಮಾಡುವುದ ತಿಳಿಸಿಕೊಡಿ.....
ಹಿಡಿ ಪ್ರೀತಿಗೆ ಹಂಬಲಿಸೋ ಜೀವಗಳನ್ನ ಮೃದುವಾಗಿ ತಬ್ಬಬೇಕಿದೆ,
ಮುಗಿಲತ್ತ ಮುಖ ಮಾಡಿದ ಕಣ್ಣುಗಳನ್ನ ಚುಂಬಿಸಿ ಹಗುರಾಗಿಸಬೇಕಿದೆ,
ಬಂದೂಕು ಹಿಡಿದು ಶಾಂತಿ ಹುಡುಕುವ ಎದೆಗಳಲ್ಲಿ ನೆದಬೇಕಿದೆ ಪಾರಿಜಾತದ ಸಸಿ.
ಧರ್ಮ ಜಾತಿಯ ಹೆಸರಲ್ಲಿ ಮನಕಲಕುವ ಮೌಡ್ಯಕ್ಕೆ ತೋರಬೇಕು ಪ್ರೀತಿ ಜೇನಿನ ರುಚಿ.
ಬದುಕು ಬದಲಾಗಲು ಏನೇನೆಲ್ಲಾ ಬೇಕು? ಪ್ರೀತಿ ಸಾಕು.
ಪ್ರೀತಿ ಮಾಡುವುದ ಕಲಿಸಿ ಕೊಡಿ.
9 months ago
ಬದುಕನ್ನು ನೋಡುವ ರೀತಿಯನ್ನು ಬದಲಿಸಿಕೊಳ್ಳಬೇಕು ಎನ್ನುವ ಸಂದೇಶವನ್ನು ನಿಮ್ಮ ಕವನ ಸುಂದರವಾಗಿ ತಿಳಿಸಿದೆ. ಅಭಿನಂದನೆಗಳು.
ReplyDeleteಕವಿತೆಯಂತೆ ಕಾಡುವ ಸಾಲುಗಳು.. ಚೆನ್ನಾಗಿದೆ, ಇಷ್ಟವಾಯ್ತು.
ReplyDelete@Sunnath sir....
ReplyDeleteನೀವು ಬಂದು ನೋಡಿ ಪ್ರತಿಕ್ರಿಯಿಸಿದ್ದಕ್ಕೆ ನಾನು ಆಭಾರಿ ಸರ್. ದಯವಿಟ್ಟು ಬರುತ್ತಾ ಇರಿ....ಧನ್ಯವಾದ :)
Neeli Hoove....
ReplyDeleteಧನ್ಯವಾದ ಗೆಳೆಯ. ನಿಮಗೆ ಇಷ್ಟವಾಗಿದ್ದು ಖುಷಿ ತಂದಿದೆ ;-)
ಹಾಯ್ ಸುನಿಲ್,
ReplyDeleteಮತ್ತೊಮ್ಮೆ ಹ್ಯಾಟ್ಸ್ ಆಫ್. ತುಂಬಾನೆ ನವಿರಾಗಿದೆ.. ಅರ್ಥಪೂರ್ಣವಾಗಿದೆ.
"ಆ ಮೋಹ,ಅನುರಾಗ, ಆವೇಗ,ಉಬ್ಬರ...ಯಾರಿಗೆ ಬೇಕು?
ಪ್ರೀತಿ ಮಾಡುವುದ ತಿಳಿಸಿಕೊಡಿ....."
"ಬಂದೂಕು ಹಿಡಿದು ಶಾಂತಿ ಹುಡುಕುವ ಎದೆಗಳಲ್ಲಿ ನೆಡಬೇಕಿದೆ ಪಾರಿಜಾತದ ಸಸಿ."
ಈ ಎರಡು ಸಾಲುಗಳು ಬೇಡ ಬೇಡ ಅಂದರೂ ನಿನ್ನೆ ರಾತ್ರಿಯಿಂದ ಮನದಲ್ಲಿ ಸುಳಿಯುತ್ತಾ ಕಾಡುತ್ತಿವೆ. ಅರ್ಥಪೂರ್ಣ ಸಾಲು ಗೆಳೆಯ..
ಹೀಗೆ ಬರಿತಾ ಇರು.
ನಿನ್ನ
ಅವೀನ್
ನಮಸ್ತೆ..
ReplyDeleteಮನುಷ್ಯನ ಬದುಕು, ಪ್ರಕೃತಿ, ಎರಡು ಹೇಗೆ ಒಂದನ್ನೊಂದು ಬೆಸೆದಿವೆ ನೋಡಿ ..
ಮಳೆ , ಕನಸು, ಪ್ರೀತಿ ಬೇಕು ಜೀವನ ಧನ್ಯಗೊಳಿಸಲು.. ಅದ ತಿಳಿಸಿ ಕೊಡಿ ಕಲಿಸಿ ಕೊಡಿ ಹೀಗೆ ನಿಮ್ಮ ಕವಿತೆಗಳಿಂದ ..ಇದ ತಿಳಿಯದ ಮನುಷ್ಯ ತನ್ನ ವಿಕೃತಿಯಲ್ಲಿ ಮೆರೆಯುತಿರುವ ಅನ್ನ ಕೊಡೊ ರೈತನಿಗೆ ಮೋಸ ಮಾಡಿ .. ಭೂಮಿ ಬಿತ್ತನೆ ಮಾಡಿ ತನ್ನ ಬೆಳೆ ಆಗೋದ ಕನಸು ಕಂಡು .. ಆಮೇಲೆ ಕಣ್ಣೀರಿನಿಂದ ಬತ್ತಿ ಹೋದ ಆ ಕಣ್ಣುಗಳಿಗ ಕನಸು ಕಾಣುವುದ ಕಲಿಸಿ ಕೊಡಿ.. ಅದು ಫಲಿಸುವ ರೀತಿಯ ತಿಳಿಸಿ ಕೊಡಿ ..
ವಂದನೆಗಳು ..
ಚೈತ್ರ .ಜಿ.ಈ
ರೀ Sunil..,
ReplyDeleteಸೊಗಸಾಗಿದೆ..
ನಾನು ಕಾಮೆಂಟ್ ಬರೆಯುವ ಬಗೆ ಯಾರಿಗೆ ಬೇಕು ಸುನಿಇಇ,
ReplyDeleteನೀನು ಕವನ ಬರೆದಾಗೆಲ್ಲ ತಂತಾನಾಗೇ ಕಾಮೆಂಟ್ ಬರೆಯುವ ಬಗೆ ತಿಳಿಸಿ ಕೊಡು...
ಪ್ರೀತಿಯಿಂದ,
ಆದರ್ಷ್
ತು೦ಬಾ ಅರ್ಥಪೂರ್ಣ ಸಾಲುಗಳು.
ReplyDeleteಕವಿತೆ ಸು೦ದರವಾಗಿದೆ.
ReplyDeleteಬದುಕಿನೆಡೆಗಿನ ನಿಮ್ಮ ವ್ಯಾಖ್ಯಾನ ಅರ್ಥಪೂರ್ಣವಾಗಿದೆ.
ವ೦ದನೆಗಳು.
ಪ್ರೀತಿಯ,
ReplyDeleteಅವೀನ್ , ಅದು , ಮನಮುಕ್ತ , ಚುಕ್ಕಿಚಿತ್ತಾರ.
ನಿಮ್ಮ ಪ್ರೋತ್ಸಾಹ ಪ್ರೀತಿಗೆ ನಾನು ಋಣಿ,
ವಂದನೆಗಳೊಂದಿಗೆ....
ಪ್ರೀತಿಯಿಂದಲೇ,
ಸುನಿ.
ಬದುಕಿನ ಬದಲಾವಣೆಯ ಬಗ್ಗೆ ನೀವು ಬರೆದ ಸಾಲುಗಳು ಅದ್ಬುತ ಕವನದ ಸಾಲುಗಳಂತಿವೆ. ಇಷ್ಟವಾಯ್ತು.
ReplyDelete👌🏼
ReplyDeleteTumba chennagide Sunil. Keep writing. Good luck
ReplyDeleteAdhbuthaavaadhaa padhagaluuu sunil 😊😊 keep writing
ReplyDeleteDhanyavadagalu..Tamma hesaru gottagalilla.
Delete